ಹರಿದಾಸರು: ಆತ್ಮಶೋಧನೆ ಹಾಗೂ ತತ್ವ ಪ್ರತಿಪಾದನೆ
Authors/Creators
Description
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹರಿದಾಸ ಸಾಹಿತ್ಯವು ಭಕ್ತಿ ಆಂದೋಲನವಾಗಿ ಮಾತ್ರವಲ್ಲದೆ, ಸಾಮಾಜಿಕ ಮತ್ತು ವೈಚಾರಿಕ ಕ್ರಾಂತಿಯ ಪ್ರಬಲ ಮಾಧ್ಯಮವಾಗಿದೆ. ಹರಿದಾಸರು ಕೇವಲ ದೈವಸ್ತುತಿಗೆ ಸೀಮಿತವಾಗದೆ, ಮನುಷ್ಯನ ಅಂತರಂಗದ ಶುದ್ಧೀಕರಣ ಮತ್ತು ಆತ್ಮಶೋಧನೆಯ ಮಾರ್ಗವನ್ನು ಸ್ಪಷ್ಟವಾಗಿ ತೋರಿದ್ದಾರೆ. ಪುರಂದರದಾಸರು, ಕನಕದಾಸರು, ವಿಜಯದಾಸರು ಹಾಗೂ ಜಗನ್ನಾಥದಾಸರು ತಮ್ಮ ಕೀರ್ತನೆಗಳ ಮೂಲಕ ಅರಿಷಡ್ವರ್ಗಗಳನ್ನು ಗೆದ್ದು, ಅಹಂಕಾರವನ್ನು ತ್ಯಜಿಸಿ ಪರಮಾತ್ಮನಿಗೆ ಶರಣಾಗುವ ಬಗೆಯನ್ನು ವಿವರಿಸಿದ್ದಾರೆ. ಮಧ್ವಾಚಾರ್ಯರ ದ್ವೈತ ಸಿದ್ಧಾಂತ ಮತ್ತು ವೇದೋಪನಿಷತ್ತುಗಳ ಕ್ಲಿಷ್ಟಕರ ಸಾರವನ್ನು ಜನಸಾಮಾನ್ಯರ ಭಾಷೆಯಲ್ಲಿ ಸರಳೀಕರಿಸಿರುವುದು ಇವರ ವೈಶಿಷ್ಟ್ಯವಾಗಿದೆ. ಬಾಹ್ಯ ಆಚರಣೆಗಿಂತ ಅಂತರಂಗದ ನಿಷ್ಕಾಮ ಭಕ್ತಿ, ಗುರುಭಕ್ತಿ ಹಾಗೂ ನೈತಿಕ ಮೌಲ್ಯಗಳೇ ಮೋಕ್ಷಕ್ಕೆ ದಾರಿ ಎಂದು ದಾಸರು ಪ್ರತಿಪಾದಿಸಿದ್ದಾರೆ. ಈ ಸಾಹಿತ್ಯವು ಮನುಷ್ಯನನ್ನು ಲೌಕಿಕ ಮೌಢ್ಯದಿಂದ ಪಾರುಮಾಡಿ, ಆಧ್ಯಾತ್ಮಿಕ ಮತ್ತು ನೈತಿಕ ಉನ್ನತಿಯತ್ತ ಕೊಂಡೊಯ್ಯುವಲ್ಲಿ ದಾರಿದೀಪವಾಗಿದೆ.
Files
14. ಹರಿದಾಸರು- ಆತ್ಮಶೋಧನೆ ಹಾಗೂ ತತ್ವ ಪ್ರತಿಪಾದನೆ.pdf
Files
(401.2 kB)
| Name | Size | Download all |
|---|---|---|
|
md5:2343878f8ba6b1b16ac4ee603fff7ecd
|
401.2 kB | Preview Download |