Published February 28, 2026 | Version v1
Journal article Open

ಸಾಮಾಜಿಕ ನ್ಯಾಯಕ್ಕಾಗಿ ಮಿಡಿದ ಕೊಲ್ಹಾಪುರದ ರಾಜರ್ಷಿ ಶಾಹು ಮಹಾರಾಜ

Description

ನಾಲ್ವಡಿ ಕೃಷ್ಣರಾಜ ಒಡೆಯರ ಸಮಕಾಲೀನರಾದ ಕೊಲ್ಹಾಪುರದ ರಾಜರ್ಷಿ ಶಾಹು ಮಹಾರಾಜರು ಭಾರತೀಯ ಸಾಮಾಜಿಕ ಇತಿಹಾಸದಲ್ಲಿ ‘ಸಾಮಾಜಿಕ ನ್ಯಾಯ’ದ ಹರಿಕಾರರಾಗಿ ಗುರುತಿಸಿಕೊಂಡಿದ್ದಾರೆ. ವೈಯಕ್ತಿಕವಾಗಿ ಅನುಭವಿಸಿದ ‘ವೇದೋಕ್ತ’ ಪ್ರಕರಣದ ಅವಮಾನವನ್ನೇ ಸಾಮಾಜಿಕ ಕ್ರಾಂತಿಯನ್ನಾಗಿ ಪರಿವರ್ತಿಸಿದ ಇವರು, ಬ್ರಾಹ್ಮಣೇತರ ಮತ್ತು ದಲಿತ ವರ್ಗಗಳ ವಿಮೋಚನೆಗಾಗಿ ಶಿಕ್ಷಣವನ್ನು ಪ್ರಬಲ ಅಸ್ತ್ರವನ್ನಾಗಿ ಬಳಸಿದರು. ತಮ್ಮ ಸಂಸ್ಥಾನದಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ, ವಿದ್ಯಾರ್ಥಿವೇತನ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಜಾರಿಗೊಳಿಸುವ ಮೂಲಕ ಸಮಸಮಾಜದ ನಿರ್ಮಾಣಕ್ಕೆ ಬುನಾದಿ ಹಾಕಿದರು. ಅಸ್ಪೃಶ್ಯತೆ ನಿವಾರಣೆ, ಮಹಿಳಾ ಹಕ್ಕುಗಳ ರಕ್ಷಣೆ, ದೇವದಾಸಿ ಪದ್ಧತಿ ನಿಷೇಧ ಹಾಗೂ ಅಂತರ್ಜಾತಿ ವಿವಾಹಗಳಿಗೆ ಕಾನೂನಿನ ಮಾನ್ಯತೆ ನೀಡುವ ಮೂಲಕ, ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನಾತ್ಮಕ ಮೀಸಲಾತಿ ಮತ್ತು ಸಾಮಾಜಿಕ ಸಮಾನತೆಯ ಆಶಯಗಳಿಗೆ ಇವರು ಮುನ್ನುಡಿ ಬರೆದರು.

Files

6. ಸಾಮಾಜಿಕ ನ್ಯಾಯಕ್ಕಾಗಿ ಮಿಡಿದ ಕೊಲ್ಹಾಪುರದ ರಾಜರ್ಷಿ ಶಾಹು ಮಹಾರಾಜ..pdf