ಕನ್ನಡದಲ್ಲಿ ತಾಂತ್ರಿಕ ಮತ್ತು ವೈಜ್ಞಾನಿಕ ಲೇಖನಗಳು
Authors/Creators
Description
ಶ್ರೀವಿನೋಭಾ ಭಾವಯವರಿಂದ ಲಿಪಿಗಳ ರಾಣಿ [1] ಎಂದು ಬಿರುದು ಪಡೆದ ಕನ್ನಡ ಭಾಷೆ ಇಂದು ತಾಂತ್ರಿಕ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ಹಿಂದೆ ಬಿದ್ದಿರುವುದು ವಿಷಾದನೀಯ ಮತ್ತು ಖಂಡನೀಯ. ಕನ್ನಡದಲ್ಲಿ ತಾಂತ್ರಿಕ ಮತ್ತು ವೈಜ್ಞಾನಿಕ ಲೇಖನಗಳಿಗೆ ಕೊರತೆ ಇಲ್ಲದಿದ್ದರೂ ಅವುಗಳು ಕೇವಲ ದಿನಪತ್ರಿಕೆಗಳು ಮತ್ತು ಬೆರಳೆಣಿಕೆಯಷ್ಟು ಪುಸ್ತಕಗಳಿಗೆ ಮಾತ್ರ ಸೀಮಿತ. ಬಹಳಷ್ಟು ಲೇಖನಗಳು ಅಂತರ್ ಜಾಲ ಮತ್ತು ಗಣಕಯಂತ್ರಗಳ ಬಳಕೆಯ ಮಾಹಿತಿಗೆ ಸೀಮಿತವಾಗಿರುತ್ತವೆ. ನವೀನತೆ ಮತ್ತು ಸೊಗಡಿನ ಕೊರತೆ ಎದ್ದು ಕಾಣುತದೆ, IEEE ಅಥವಾ Springier ನಲ್ಲಿರುವಂತೆ ವೈಜ್ಞಾನಿಕ ಆವಿಷ್ಕಾರಗಳು ಕನ್ನಡದ್ಲಲಿ ಏಕೆ ಪ್ರಕಟವಾಗುವುದಿಲ್ಲ, ಕರ್ನಾಟಕದಲ್ಲಿ ನೆಡೆಯುವ ಕರ್ನಾಟಕ ಸರ್ಕಾರದ ಧನ ಸಹಾಯದಿಂದ ನೆಡೆಯುವ ಸಂಶೋಧನೆಗಳು ಕೂಡ ಪ್ರಕಟವಾಗುವುದು ಆಂಗ್ಲ ಭಾಷೆಯಲ್ಲಿ. ಇದೇ ಅಲ್ಲವೇ ಶೂನ್ಯ ಸಾಧನೆ ಎಂದರೆ ?
ಈ ಶೂನ್ಯಸಾಧನೆಗೆ ಕಾರಣ ಕೇಳಿದರೆ ಬರುವುದು ಒಂದೇ ಉತ್ತರ ತಾಂತ್ರಿಕ ಅಡಚಣೆ. ಇದೇ ರೀತಿಯ ವೈಜ್ಞಾನಿಕ ಲೇಖನಗಳು ಫ್ರೆಂಚ್ , ಡಚ್ , ಲ್ಯಾಟಿನ್ ಮತ್ತು ಜಪಾನೀ ಭಾಷೆಗಲ್ಲಿ ಪ್ರಕಟವಾಗುತ್ತವೆ [2][3], ಅವಿರಿಗಿಲ್ಲದ ತಾಂತ್ರಿಕ ಅಡಚಣೆ ಕನ್ನಡ ಭಾಷೆಗೆ ಮಾತ್ರವೇಕೆ?