Published March 25, 2026 | Version v1
Journal article Open

ಕರ್ನಾಟಕದಲ್ಲಿ ನಿರಾಶ್ರಿತ ಮಕ್ಕಳ ಸಬಲೀಕರಣ: ಒಂದು ರಾಜ್ಯಶಾಸ್ತ್ರೀಯ ಅಧ್ಯಯನ

Description

ಈ ಸಂಶೋಧನಾ ಪ್ರಬಂಧವು ಕರ್ನಾಟಕದ ನಿರಾಶ್ರಿತ ಮಕ್ಕಳ ಸಬಲೀಕರಣವನ್ನು ರಾಜ್ಯಶಾಸ್ತ್ರೀಯ ದೃಷ್ಟಿಕೋನದಿಂದ ವಿಶ್ಲೇಷಿಸಲಾಗಿದೆ. ನಿರಾಶ್ರಿತ ಮಕ್ಕಳು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳ ಪರಿಣಾಮವಾಗಿ ಅಂಚಿನಲ್ಲಿರುವ ಸಮೂಹವಾಗಿದೆ. ಭಾರತದಲ್ಲಿ ಜುವೆನೈಲ್ ಜಸ್ಟಿಸ್ (ಬಾಲ ನ್ಯಾಯ) ಕಾಯಿದೆ, ಶಿಕ್ಷಣದ ಹಕ್ಕು ಕಾಯಿದೆ ಮತ್ತು ವಿವಿಧ ಪುನರ್ವಸತಿ ಯೋಜನೆಗಳು ಅಸ್ತಿತ್ವದಲ್ಲಿದ್ದರೂ, ಅವುಗಳ ಜಾರಿಗೆ ಇರುವ ಸವಾಲುಗಳು ನಿರಾಶ್ರಿತ ಮಕ್ಕಳ ಜೀವನ ಮಟ್ಟದಲ್ಲಿ ಪರ್ಯಾಯ ಬದಲಾವಣೆ ತರುವಲ್ಲಿ ವಿಫಲವಾಗಿವೆ. ಈ ಅಧ್ಯಯನವು ಕಲ್ಯಾಣ ರಾಜ್ಯ ಸಿದ್ಧಾಂತ, ಹಕ್ಕು-ಆಧಾರಿತ ದೃಷ್ಟಿಕೋನ ಮತ್ತು ಸಾಮರ್ಥ್ಯ ಸಿದ್ಧಾಂತಗಳನ್ನು ಸಿದ್ಧಾಂತಾತ್ಮಕ ಆಧಾರವಾಗಿ ಬಳಸಿಕೊಂಡು, ಕರ್ನಾಟಕದಲ್ಲಿ ನೀತಿ ನಿರೂಪಣೆ ಮತ್ತು ಜಾರಿಗೆ ಇರುವ ಅಂತರವನ್ನು ಪರಿಶೀಲಿಸುತ್ತದೆ. ವಿಶೇಷವಾಗಿ ಕರ್ನಾಟಕದಲ್ಲಿ ಶಿಕ್ಷಣ, ಮಾನಸಿಕ ಆರೋಗ್ಯ ಮತ್ತು ಸ್ಥಳೀಯ ಆಡಳಿತದ ಪಾತ್ರವನ್ನು ವಿಶ್ಲೇಷಿಸಲಾಗಿದೆ. ಅಧ್ಯಯನವು ತಿಳಿಸುವಂತೆ ಸಬಲೀಕರಣ ಕೇವಲ ಆಶ್ರಯ ಒದಗಿಸುವುದರಿಂದ ಸಾಧ್ಯವಿಲ್ಲ, ಅದು ಸಮಗ್ರ ಹಕ್ಕು-ಆಧಾರಿತ, ಸಮನ್ವಯಿತ ಮತ್ತು ಒಳಗೊಂಡ ಆಡಳಿತ ವ್ಯವಸ್ಥೆಯನ್ನು ಅಗತ್ಯಪಡಿಸುತ್ತದೆ. ಈ ಪ್ರಬಂಧವು ನಿರಾಶ್ರಿತ ಮಕ್ಕಳ ಪ್ರಶ್ನೆಯನ್ನು ಸಾಮಾಜಿಕ ಕಲ್ಯಾಣದ ವಿಷಯವಷ್ಟೇ ಅಲ್ಲ, ಪ್ರಜಾಸತ್ತಾತ್ಮಕ ಆಡಳಿತದ ಗುಣಮಟ್ಟದ ಸೂಚಕವಾಗಿ ಪರಿಗಣಿಸುತ್ತದೆ.

Files

24. ಶ್ರೀಮತಿ ಜ್ಯೋತಿ & ಕೃಷ್ಣಪ್ಪ ಜಿ. ನಿಂಬಕ್ಕನವರ.pdf