ಜಲಗಾರ (ನಾಟಕ) ಒಂದು ಅವಲೋಕನ
Authors/Creators
- 1. ಬಿ. ಎಂ. ಶ್ರೀ. ಪ್ರತಿಷ್ಠಾನ, ಬೆಂಗಳೂರು- ೫೬೦೦೦೮
- 2. ಆಚಾರ್ಯ ಪಾಠಶಾಲಾ ವಾಣಿಜ್ಯ ಕಾಲೇಜು, ನರಸಿಂಹರಾಜ ಕಾಲೋನಿ, ಬೆಂಗಳೂರು – ೫೬೦೦೦೪
Contributors
Rights holders:
- 1. SESHADRIPURAM RESEARCH FOUNDATION
Description
Abstract:
ಕುವೆಂಪು ರಚಿಸಿದ ಜಲಗಾರ ನಾಟಕವು ಎರಡು ದೃಶ್ಯಗಳನ್ನೊಳಗೊಂಡಿದ್ದು ಸಾಮಾಜಿಕ ಸಮಸ್ಯೆಗಳು, ಅಸ್ಪೃಶ್ಯತೆಯಂತಹ ಪಿಡುಗುಗಳು, ಕೆಳವರ್ಗದ ಜನರ ಕಷ್ಟಗಳು, ಹಾಗೂ ಪುರೋಹಿತಶಾಹಿ ವರ್ಗದ ದಬ್ಬಾಳಿಕೆಯನ್ನು ಪ್ರಶ್ನಿಸುತ್ತದೆ. ಜಲಗಾರ, ರೈತ ಮತ್ತು ಶಿವನ ಪಾತ್ರಗಳ ಮೂಲಕ ದೇವರು ಜನಸಾಮಾನ್ಯರ ನಿತ್ಯದ ಕಾಯಕದಲ್ಲಿ ಕಾಣಬೇಕೆಂಬ ಕುವೆಂಪುರವರ ಆಶಯವನ್ನು ಈ ನಾಟಕವು ನಿರೂಪಿಸುತ್ತದೆ. ಪ್ರಸ್ತುತ ಈ ಲೇಖನದ ಉದ್ದೇಶವು ಕುವೆಂಪು ಕಾಲದ ಜಲಗಾರನಿಗೂ ಈಗಿನ ಕಾಲದ ಜಲಗಾರನಿಗೂ ಇರುವ ಕೆಲವು ವ್ಯತ್ಯಾಸಗಳು, ಸಾಮ್ಯತೆಗಳು, ಹೋಲಿಕೆಗಳನ್ನು ತಿಳಿಸುವುದಾಗಿದೆ. ಈ ಲೇಖನವು ಸಾಮಾಜಿಕ ಬಹಿಷ್ಕಾರದ ಚೌಕಟ್ಟನ್ನು ಬಳಸಿಕೊಂಡು ಕೆಳವರ್ಗದವರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಸಾರಾಂಶ ಮಾಡಲು ಮತ್ತು ಭಾರತೀಯ ಸಮಾಜದಲ್ಲಿ ಅವರ ಸಮಕಾಲೀನ ನಿಲುವನ್ನು ಎತ್ತಿ ತೋರಿಸಲು ಕೇಂದ್ರೀಕರಿಸುತ್ತದೆ.
Keywords: ಜಲಗಾರ ಪರಿಕಲ್ಪನೆ, ವಿಭಿನ್ನ ಅರ್ಥ, ಪಾತ್ರಗಳ ದೃಷ್ಟಿಕೋನ, ದೇವರ ಕಲ್ಪನೆ, ಕಾಲಘಟ್ಟ, ಸಾಮಾಜಿಕ ವಿಮರ್ಶೆ.