Published February 10, 2026 | Version v1
Journal article Open

ಕನ್ನಡ ಶಾಸ್ತ್ರೀಯ ಸ್ಥಾನಮಾನದ ಅಧಿಕೃತ ಆಕರಗಳಾಗಿ ಪಂಪಪೂರ್ವಯುಗದ ಭಾಷಿಕ-ಸಾಹಿತ್ಯಕ ಮೌಲ್ಯವುಳ್ಳ ಶಾಸನಗಳು

Description

ಪ್ರಸ್ತುತ ಲೇಖನವು ಕನ್ನಡ ಭಾಷೆಯ ಶಾಸ್ತ್ರೀಯ ಸ್ಥಾನಮಾನವನ್ನು ದೃಢೀಕರಿಸುವಲ್ಲಿ ಪಂಪಪೂರ್ವ ಯುಗದ ಶಾಸನಗಳ ಸಾಹಿತ್ಯಕ ಮತ್ತು ಭಾಷಿಕ ಮೌಲ್ಯಗಳನ್ನು ವಿಶ್ಲೇಷಿಸುತ್ತದೆ. ಕ್ರಿ.ಶ. 450ರ ಹಲ್ಮಿಡಿ ಶಾಸನದಿಂದ ಆರಂಭಿಸಿ, ತಮಟಕಲ್ಲು, ಬಾದಾಮಿಯ ಕಪ್ಪೆ ಅರಭಟ್ಟ ಹಾಗೂ ಶ್ರವಣಬೆಳಗೊಳದ ನಿಷಧಿ ಶಾಸನಗಳು ಕನ್ನಡದ ಪ್ರಾಚೀನತೆ ಮತ್ತು ಪ್ರೌಢಿಮೆಗೆ ಅಧಿಕೃತ ಆಧಾರಗಳಾಗಿವೆ. ಕವಿರಾಜಮಾರ್ಗಕ್ಕಿಂತ ಹಿಂದೆಯೇ ಕನ್ನಡದಲ್ಲಿ ಗದ್ಯ-ಪದ್ಯಗಳ ಸೃಜನಶೀಲ ಬಳಕೆ ಇತ್ತೆಂಬುದನ್ನು ಈ ಶಾಸನಗಳು ಸಾಬೀತುಪಡಿಸುತ್ತವೆ. ಕೇಂದ್ರ ಸರ್ಕಾರ ನಿಗದಿಪಡಿಸಿದ 1500-2000 ವರ್ಷಗಳ ಇತಿಹಾಸದ ಮಾನದಂಡಕ್ಕೆ ಪೂರಕವಾಗಿರುವ ಈ ಶಾಸನಗಳು, ಕನ್ನಡದ ಸ್ವೋಪಜ್ಞತೆ ಮತ್ತು ನಿರಂತರತೆಯನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂಬುದನ್ನು ಲೇಖನವು ಸವಿಸ್ತಾರವಾಗಿ ಚರ್ಚಿಸುತ್ತದೆ.

Files

1. ಕನ್ನಡ ಶಾಸ್ತ್ರೀಯ ಸ್ಥಾನಮಾನದ ಅಧಿಕೃತ ಆಕರಗಳಾಗಿ ಪಂಪಪೂರ್ವಯುಗದ ಭಾಷಿಕ-ಸಾಹಿತ್ಯಕ ಮೌಲ್ಯವುಳ್ಳ ಶಾಸನಗಳು..pdf