Published September 1, 2025 | Version v1
Journal article Open

ಉಳಿಯತ್ತಡ್ಕರ ಕವನಗಳಲ್ಲಿ ಶೋಷಣೆಯ ಧ್ವನಿ - ಮರು ಓದು

Description

ಕಾಸರಗೋಡಿನ ಬಹುತ್ವದ ಸಂಸ್ಕೃತಿಯಲ್ಲಿ ರಾಧಾಕೃಷ್ಣ ಉಳಿಯತ್ತಡ್ಕ ಅವರ ಸಾಹಿತ್ಯವು ನೆಲಮೂಲದ ದಲಿತ ಸಂವೇದನೆಗಳನ್ನು ಪರಿಣಾಮಕಾರಿಯಾಗಿ ದಾಖಲಿಸಿದೆ. ಶತಮಾನಗಳಿಂದ ಶೋಷಣೆಗೆ ಒಳಗಾದ ಸಮುದಾಯದ ನೋವು, ಅಸಹಾಯಕತೆ ಮತ್ತು ಸಾಮಾಜಿಕ ತಾರತಮ್ಯಗಳನ್ನು ಇವರ ‘ಅರ್ಧಸತ್ಯದ ಬೆಳಕು' ಹಾಗೂ ‘ಬೆಂಕಿನುಂಗುವ ಹುಡುಗ' ಕವನ ಸಂಕಲನಗಳು ಪ್ರತಿಬಿಂಬಿಸುತ್ತವೆ. ತೀವ್ರಗಾಮಿ ಹೋರಾಟದ ದಾರಿಗಿಂತ ಭಿನ್ನವಾಗಿ, ಉಳಿಯತ್ತಡ್ಕರ ಕವಿತೆಗಳು ಬುದ್ಧನ ಮೌನದಂತೆ ಸೌಮ್ಯವಾದರೂ, ವಿಚಾರಪೂರ್ಣವಾದ ಪ್ರತಿರೋಧವನ್ನು ಒಡ್ಡುತ್ತವೆ. ರಾಜಕೀಯ ವ್ಯವಸ್ಥೆಯ ವಿಡಂಬನೆ, ಸ್ತ್ರೀಯರ ಮೇಲಿನ ದೌರ್ಜನ್ಯ ಮತ್ತು ಕಾರ್ಮಿಕ ವರ್ಗದ ಸಂಕಷ್ಟಗಳನ್ನು ಈ ಕೃತಿಗಳು ಪ್ರಶ್ನಿಸುತ್ತವೆ. ಶೋಷಿತ ವರ್ಗವು ಕೀಳರಿಮೆಯ ಮುಖವಾಡ ಕಳಚಿ, ಸ್ವ-ಅಸ್ತಿತ್ವವನ್ನು ಕಂಡುಕೊಳ್ಳಬೇಕೆಂಬ ಆಶಯದೊಂದಿಗೆ, ಸಾಮಾಜಿಕ ಸಮಾನತೆ ಮತ್ತು ಎಚ್ಚರದ ಪ್ರಜ್ಞೆಯನ್ನು ಕವಿ ಮೂಡಿಸಲು ಯತ್ನಿಸಿರುವುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

Files

ಉಳಿಯತ್ತಡ್ಕರ ಕವನಗಳಲ್ಲಿ ಶೋಷಣೆಯ ಧ್ವನಿ ಮರು ಓದು.pdf