Published December 24, 2025 | Version v1

ಕನ್ನಡ ಮಹಿಳಾ ಕಾವ್ಯದಲ್ಲಿ ಬುದ್ಧ, ಗಾಂಧಿ, ಅಂಬೇಡ್ಕರ್.

  • 1. ಸಹಾಯಕ ಪ್ರಾಧ್ಯಾಪಕರು ಸೈಂಟ್ ಕ್ಲಾರೆಟ್ ಕಾಲೇಜು (ಸ್ವಾಯತ್ತ), ಜಾಲಹಳ್ಳಿ, ಬೆಂಗಳೂರು-೫೬೦೦೧೩

Description

ಪ್ರಸ್ತುತ ಪ್ರಬಂಧವು ಕನ್ನಡದ ಹೊಸ ತಲೆಮಾರಿನ ಮಹಿಳಾ ಕವಯಿತ್ರಿಯರು ಚಾರಿತ್ರಿಕ ಪುರುಷರಾದ ಬುದ್ಧ, ಗಾಂಧಿ ಮತ್ತು ಅಂಬೇಡ್ಕರ್ ಅವರ ವ್ಯಕ್ತಿತ್ವಗಳನ್ನು ಕಾವ್ಯದ ಮೂಲಕ ಗ್ರಹಿಸಿರುವ ಭಿನ್ನ ದೃಷ್ಟಿಕೋನಗಳನ್ನು ಚರ್ಚಿಸುತ್ತದೆ. ಸಾಂಪ್ರದಾಯಿಕ ಇತಿಹಾಸವು ಈ ಮಹನೀಯರನ್ನು ಕೇವಲ 'ಮಹಾತ್ಮ' ಅಥವಾ 'ದೇವ ಸಮಾನ' ವ್ಯಕ್ತಿಗಳಾಗಿ ಚಿತ್ರಿಸಿದರೆ, ಮಹಿಳಾ ಕಾವ್ಯವು ಅವರ ತತ್ವಗಳನ್ನು ವರ್ತಮಾನದ ಬಿಕ್ಕಟ್ಟುಗಳಿಗೆ ಮುಖಾಮುಖಿಯಾಗಿಸುತ್ತದೆ. ಬುದ್ಧನ ವೈರಾಗ್ಯವನ್ನು ಸ್ತ್ರೀವಾದಿ ನೆಲೆಯಲ್ಲಿ ಪ್ರಶ್ನಿಸುವುದು, ಗಾಂಧೀಜಿಯ ಅಹಿಂಸೆಯ ತತ್ವವು ಇಂದಿನ ಹಿಂಸಾತ್ಮಕ ಜಗತ್ತಿನಲ್ಲಿ ಪ್ರತಿಮೆಯಾಗಿ ಸೀಮಿತಗೊಳ್ಳುತ್ತಿರುವುದನ್ನು ವ್ಯಂಗ್ಯವಾಡುವುದು ಮತ್ತು ಅಂಬೇಡ್ಕರ್ ಅವರ ಸಂವಿಧಾನಿಕ ಆಶಯಗಳು ಕೇವಲ ದಲಿತರಿಗೆ ಮಾತ್ರವಲ್ಲದೆ ಇಡೀ ಮಹಿಳಾ ಕುಲಕ್ಕೆ ಬಿಡುಗಡೆಯ ಹಾದಿಯಾಗಿದೆ ಎಂದು ಈ ಕಾವ್ಯಗಳು ಧ್ವನಿಸುತ್ತವೆ. ಇತಿಹಾಸವನ್ನು ಮರುಚಿಂತನೆಗೆ ಒಳಪಡಿಸುವ ಈ ಪ್ರಕ್ರಿಯೆಯು ಕನ್ನಡ ಮಹಿಳಾ ಕಾವ್ಯದ ವೈಚಾರಿಕ ಪ್ರಬುದ್ಧತೆಯನ್ನು ಸಾಬೀತುಪಡಿಸುತ್ತದೆ.

Files

Restricted

The record is publicly accessible, but files are restricted. <a href="https://zenodo.org/account/settings/login?next=https://zenodo.org/records/18045206">Log in</a> to check if you have access.