ಕರ್ನಾಟಕ ಇತಿಹಾಸ ಮತ್ತು ಕನ್ನಡ ಸಾಹಿತ್ಯ: ಸಾಂಸ್ಕೃತಿಕ ದೃಷ್ಟಿಕೋನ
Authors/Creators
Description
ಇತಿಹಾಸ ಮತ್ತು ಕನ್ನಡ ಸಾಹಿತ್ಯದ ನಡುವಿನ ಆಳವಾದ ಸಂಬಂಧವನ್ನು ಸಾಂಸ್ಕೃತಿಕ ದೃಷ್ಟಿಯಿಂದ ವಿಶ್ಲೇಷಿಸುತ್ತದೆ. ಇತಿಹಾಸವು ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ದಾಖಲಿಸುವುದಾದರೆ, ಸಾಹಿತ್ಯವು ಅವುಗಳ ಮಾನವೀಯ ಅನುಭವಗಳು, ಭಾವನೆಗಳು ಮತ್ತು ಮೌಲ್ಯಗಳನ್ನು ಅಭಿವ್ಯಕ್ತಗೊಳಿಸುತ್ತದೆ. ಕನ್ನಡ ಸಾಹಿತ್ಯವು ವಿಭಿನ್ನ ಯುಗಗಳಲ್ಲಿ (ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ) ಆಗಿನ ಸಂಸ್ಕೃತಿ, ಜನಜೀವನ, ನಂಬಿಕೆಗಳು ಮತ್ತು ಪರಂಪರೆಗಳನ್ನು ಪ್ರತಿಬಿಂಬಿಸಿದೆ. ಪಂಪ, ರನ್ನ, ಬಸವಣ್ಣ, ಹರಿಹರರಿಂದ ಮೊದಲ್ಗೊಂಡು ನವೋದಯ, ನವ್ಯ, ದಲಿತ ಸಾಹಿತ್ಯದವರೆಗೂ ಕನ್ನಡ ಸಾಹಿತ್ಯವು ಇತಿಹಾಸದ ಸಾಮಾಜಿಕ ಚಲನೆಗಳಿಗೆ ಸ್ಪಂದಿಸಿರುವುದು ಕಂಡುಬರುತ್ತದೆ. ವಚನ ಸಾಹಿತ್ಯ ಮತ್ತು ಜನಪದ ಸಾಹಿತ್ಯ ಸಮಾನತೆ, ಸಹಕಾರ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರೆ, ಆಧುನಿಕ ಸಾಹಿತ್ಯವು ವಸಾಹತುಶಾಹಿ ಅನುಭವ, ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ಅಸಮಾನತೆಗಳ ಚಿತ್ರಣ ನೀಡುತ್ತದೆ.
Files
1. ಕರ್ನಾಟಕ ಇತಿಹಾಸ ಮತ್ತು ಕನ್ನಡ ಸಾಹಿತ್ಯ ಸಾಂಸ್ಕೃತಿಕ ದೃಷ್ಟಿಕೋನ.pdf
Files
(421.9 kB)
| Name | Size | Download all |
|---|---|---|
|
md5:a7194f8c401234063647beb6581b5004
|
421.9 kB | Preview Download |