ಡಾ. ಬಿ. ಆರ್. ಅಂಬೇಡ್ಕರವರ ದೃಷ್ಟಿಕೋನದಲ್ಲಿ ಮಹಿಳಾ ಸಬಲೀಕರಣ
Authors/Creators
Description
ಮಹಿಳಾ ಸಬಲೀಕರಣ ಎನ್ನುವುದು ಮಹಿಳೆಯರನ್ನು ಹಳೆಯ ಸಮಾಜದಿಂದ ಹೊರಗಡೆ ತಂದು ಮಹಿಳೆಯರಿಗೆ ಸ್ವಾತಂತ್ರ್ಯ, ಸಮಾನತೆ, ಗೌರವ ನೀಡುವುದು. ಸಬಲೀಕರಣವು ಡಾ. ಬಿ. ಆರ್. ಅಂಬೇಡ್ಕರವರ ದೃಷ್ಟಿಯಲ್ಲಿ ಒಂದು ಮಹತ್ವವಾದ ಹೆಜ್ಜೆಯನ್ನು ಹಾಕುವುದು ಆಗಿತ್ತು. ಮಹಿಳೆಯರಿಗಾಗಿ ಸಂವಿಧಾನದ ಮೂಲಭೂತ ಹಕ್ಕುಗಳ ಮೂಲಕ ಹಲವಾರು ಹಕ್ಕುಗಳನ್ನು ಜಾರಿಗೆ ತಂದರು. ಅಲ್ಲದೆ ಮಹಿಳೆಯರಿಗೆ ವಿಶೇಷವಾದ ಆಸ್ತಿ ಹಕ್ಕು (ಹಿಂದೂ ಕೋಡ್ ಬಿಲ್) ಜಾರಿಗೆ ತಂದಿದ್ದರು. ಪ್ರಾಚೀನ ಕಾಲದಲ್ಲಿ ಮಹಿಳೆಯರ ಮೇಲೆ ಎಸಗುವ ಕೃತ್ಯಗಳಿಗೆ ಕಡಿವಾಣ ಹಾಕಿ ಕಾನೂನು ಕ್ರಮಗಳನ್ನು ಅನುಸರಿಸಿ ಮಹಿಳೆಯರಿಗೆ ಶಿಕ್ಷಣ, ಸಂಘಟನೆ, ಹೋರಾಟ ತತ್ವದ ಮಾರ್ಗವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಡಾ. ಬಿ. ಆರ್. ಅಂಬೇಡ್ಕರ್ ಅವರು ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಹಕ್ಕುಗಳ ಪರಿಪೂರ್ಣ ರಕ್ಷಕರೆಂದು ಪರಿಗಣಿಸಲ್ಪಟ್ಟ ವ್ಯಕ್ತಿ. ಅವರ ದೃಷ್ಟಿಕೋನದಲ್ಲಿ ಮಹಿಳಾ ಸಬಲೀಕರಣ ಕೇವಲ ಮಹಿಳೆಯರ ಅಭಿವೃದ್ಧಿಯೇ ಅಲ್ಲ, ಅದು ಸಮಾಜದ ಒಟ್ಟಾರೆ ಪ್ರಗತಿಯ ಪ್ರಮುಖ ಅಂಶವಾಗಿದೆ. ಅಂಬೇಡ್ಕರ್ ಅವರ ಶಿಕ್ಷಣ, ಹಕ್ಕು ಮತ್ತು ಶಕ್ತಿ ಕುರಿತ ನಿಟ್ಟಿನ ಪ್ರತಿಪಾದನೆಗಳು, ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕ ಸ್ವಾತಂತ್ರ್ಯ ನೀಡುವತ್ತ ಗಮನ ಹರಿಸುತ್ತವೆ.
Files
5. ಡಾ. ಬಿ. ಆರ್. ಅಂಬೇಡ್ಕರವರ ದೃಷ್ಟಿಕೋನದಲ್ಲಿ ಮಹಿಳಾ ಸಬಲೀಕರಣ.pdf
Files
(231.1 kB)
| Name | Size | Download all |
|---|---|---|
|
md5:cf37a1363c749099fc3f4a773aaa7185
|
231.1 kB | Preview Download |