ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಬೈ ಕರ್ನಾಟಕದ ಪಾತ್ರ: ಒಂದು ಐತಿಹಾಸಿಕ ವಿಶ್ಲೇಷಣೆ
Authors/Creators
Description
ಸಾರಲೇಖ : ಕರ್ನಾಟಕದ ಏಕೀಕರಣ ಎಂಬ ಮಹಾನ್ ಕಾರ್ಯದಲ್ಲಿ ನಾಡಿನ ಎಲ್ಲ ಭಾಗದ ಹೋರಾಟಗಾರರು, ಸಂಘ-ಸಂಸ್ಥೆಗಳು, ಪತ್ರಿಕೆಗಳು ಭಾಗವಹಿಸಿದ್ದರೂ, ಏಕೀಕರಣ ಚಳುವಳಿಯಲ್ಲಿ ಮುಂಚೂಣಿ ನಾಯಕತ್ವವನ್ನು ಮತ್ತು ಆರಂಭಿಕ ಹೋರಾಟವನ್ನು ಮುಂಬೈ ಕರ್ನಾಟಕದ ನಾಯಕರುಗಳು ಮತ್ತು ಸಂಘಸಂಸ್ಥೆಗಳು ವಹಿಸಿವೆ. ಮೈಸೂರು ಭಾಗದ ಜನತೆ ಮಹಾರಾಜರ ಆಡಳಿತದ ಅನುಕೂಲತೆಗಳನ್ನು ಮತ್ತು ಭಾಷಾ ಅಸ್ಮಿತೆಯ ಕೊರತೆಯನ್ನು ಅನುಭವಿಸದಿರುವುದೇ ಆ ಭಾಗದಲ್ಲಿ ಏಕೀಕರಣ ಚಳುವಳಿ ಪ್ರಾರಂಭದಲ್ಲಿ ಬೆಳೆದು ಬರದಿರುವುದಕ್ಕೆ ಕಾರಣವಾಗಿದ್ದು, ಆಲೂರು ವೆಂಕಟರಾಯರು ಹೇಳುವಂತೆ, “ಮೈಸೂರು ಸಂಸ್ಥಾನದ ಜನತೆ ತಾಯಿಯ ತೊಡೆಯ ಮೇಲೆ ಮಲಗಿ ಹಾಲು ಕುಡಿದವರು. ಆದ್ದರಿಂದ ಅವರಿಗೆ ಕರ್ನಾಟಕದ ಏಕೀಕರಣದ ಕಲ್ಪನೆ ಇರಲು ಸಾಧ್ಯವಿಲ್ಲʼʼ ಎಂದು ಹೇಳಿದರು. ಮುಂದೆ 1927 ರಲ್ಲಿ ರಾಜಕೀಯ ನಾಯಕರು ಮತ್ತು ಗಣ್ಯರ ಸಹಿ ಪಡೆದು ಕರ್ನಾಟಕ ಏಕೀಕರಣದ ಸಾರ್ವತ್ರಿಕ ಮನವಿಗೆ ಸಹಿ ಮಾಡಿದ ಬಹುತೇಕರು ಮುಂಬೈ ಕರ್ನಾಟಕ ಭಾಗದವರೇ ಆಗಿದ್ದರು. ಒಟ್ಟಿನಲ್ಲಿ ತಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಮತ್ತು ಅಸ್ಮಿತೆಗಾಗಿ ಕನ್ನಡಿಗರು ಹೋರಾಡಿದ್ದು, ಈ ಹೋರಾಟಕ್ಕೆ ನಾಂದಿ ಹಾಕಿ ಏಕೀಕೃತ ಕರ್ನಾಟಕದ ರಚನೆಗೆ ಪ್ರಮುಖ ಕೊಡುಗೆಯನ್ನು ಮುಂಬೈ ಕರ್ನಾಟಕ ವಹಿಸಿರುವುದನ್ನು ನೋಡಬಹುದು.
Files
19. ರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಬೈ ಕರ್ನಾಟಕದ ಪಾತ್ರ ಒಂದು ಐತಿಹಾಸಿಕ ವಿಶ್ಲೇಷಣೆ.pdf
Files
(270.8 kB)
| Name | Size | Download all |
|---|---|---|
|
md5:3b6009f6a496c8282754fe8a122d4a27
|
270.8 kB | Preview Download |