Published October 3, 2025 | Version v1
Journal article Open

ವಚನ ಕ್ರಾಂತಿ ಮತ್ತು ನಾಟಕ ಸಾಹಿತ್ಯ

Description

ಕನ್ನಡ ನಾಟಕ ಸಾಹಿತ್ಯವು ಪ್ರಾಚೀನ ಕಾಲದಲ್ಲಿ ಜನರ ನಂಬಿಕೆ, ಆಚರಣೆ ಮತ್ತು ಸಂಪ್ರದಾಯದ ಪ್ರದರ್ಶನವಾಗಿದ್ದರೆ, ಆಧುನಿಕ ಕಾಲದಲ್ಲಿ ಅದು ಸ್ವತಂತ್ರ ಕಲೆಯ ರೂಪವನ್ನು ಪಡೆದಿದೆ. ʼಮಿತ್ರವಿಂದ ಗೋವಿಂದʼ ನಾಟಕದಿಂದ ಆರಂಭವಾಗಿ, ಸಂಸ್ಕೃತ ಮತ್ತು ಗ್ರೀಕ್ ರಂಗಭೂಮಿಯ ಪ್ರಭಾವದಲ್ಲಿ ಕನ್ನಡ ನಾಟಕವು ತನ್ನ ಪೂರ್ಣ ಸ್ವರೂಪವನ್ನು ತಲುಪಿತು. ಮೈಸೂರು ಒಡೆಯರ ಕಾಲದಿಂದ ಪ್ರಾರಂಭಗೊಂಡ ಆಧುನಿಕ ಕನ್ನಡ ನಾಟಕ ಪರಂಪರೆಯಲ್ಲಿ ಶಾಕುಂತಲಾ ನಾಟಕ ನಾಂದಿ ಹಾಡಿತು. ಶರಣರ ವಚನ ಚಳುವಳಿ 12ನೇ ಶತಮಾನದ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂದೇಶಗಳನ್ನು ಒಳಗೊಂಡಿದ್ದು, ಆಧುನಿಕ ನಾಟಕಕಾರರು ಈ ಚಳುವಳಿಯ ಅಂಶಗಳನ್ನು ಸಮಕಾಲೀನ ಸನ್ನಿವೇಶಗಳಿಗೆ ಹೊಂದಿಕೊಂಡು ನಾಟಕಗಳನ್ನು ರಚಿಸುತ್ತಿದ್ದಾರೆ. ಪಿ. ಲಂಕೇಶರ ʼಸಂಕ್ರಾಂತಿʼ, ಗಿರೀಶ್ ಕಾರ್ನಾಡರ ʼತಲೆದಂಡʼ, ಹೆಚ್.ಎಸ್.ಶಿವಪ್ರಕಾಶರ ʼಮಹಾಚೈತ್ರʼ, ಚಂದ್ರಶೇಖರ್ ಕಂಬಾರ ಅವರ ʼಶಿವರಾತ್ರಿʼ, ಡಾ. ನಟರಾಜ್ ಬೂದಾಳ್, ಡಾ. ವಿಕ್ರಂ ವಿಸಾಜಿ ಅವರ ನಾಟಕಗಳು ವಚನ ಕ್ರಾಂತಿಯ ಪರಂಪರೆಯನ್ನು ನವೀಕೃತವಾಗಿ ಸಮಕಾಲೀನ ದೃಷ್ಟಿಕೋನದಲ್ಲಿ ಪ್ರದರ್ಶಿಸುತ್ತವೆ. ಈ ನಾಟಕಗಳು ಶರಣರ ತತ್ತ್ವಗಳನ್ನು ಸಾಮಾಜಿಕ ನ್ಯಾಯ, ಜಾತಿ ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಪ್ರಚಾರಕ್ಕೆ ಉಪಯೋಗಿಸುತ್ತವೆ.

Files

27. ವಚನ ಕ್ರಾಂತಿ ಮತ್ತು ನಾಟಕ ಸಾಹಿತ್ಯ.pdf