Published October 3, 2025 | Version v1

ಜಾನಪದ ಸಾಹಿತ್ಯ ಮತ್ತು ಸ್ತ್ರೀ ಚಿಂತನೆ

Description

ಜಾನಪದ ಸಾಹಿತ್ಯವು ಜನರ ಬದುಕಿನ ಪ್ರತಿಫಲನವಾಗಿದ್ದು, ಜನಜೀವನದ ಒಡನಾಟ, ನಂಬಿಕೆ, ಆಚರಣೆ, ಸಂಸ್ಕೃತಿ ಹಾಗೂ ಜೀವನ ಮೌಲ್ಯಗಳನ್ನು ಒಳಗೊಂಡಿದೆ. ಮೌಖಿಕ ಪರಂಪರೆಯಿಂದ ಹರಿದಾಡಿದ ಈ ಸಾಹಿತ್ಯದಲ್ಲಿ ತಾಯಿ, ತವರು, ಪ್ರೀತಿ, ಧರ್ಮ, ಪ್ರಕೃತಿ, ದುಡಿಮೆ, ಸಹಬಾಳ್ವೆ, ಕುಟುಂಬ, ಆಚಾರ-ವಿಚಾರ, ನೀತಿ-ನಡತೆ ಮುಂತಾದ ಅಂಶಗಳು ಪ್ರತಿಬಿಂಬಿತವಾಗಿವೆ. ವಿಶೇಷವಾಗಿ ಮಹಿಳೆಯರ ಕೊಡುಗೆ ಜನಪದ ಸಾಹಿತ್ಯದಲ್ಲಿ ಅನನ್ಯವಾಗಿದ್ದು, ತ್ರಿಪದಿ, ಗರತಿಯ ಹಾಡು, ಭಜನೆ ಮುಂತಾದ ರೂಪಗಳಲ್ಲಿ ಅವರು ತಮ್ಮ ಜೀವನಾನುಭವವನ್ನು ಕಾವ್ಯಗೊಳಿಸಿದ್ದಾರೆ. ವಿದೇಶಿ ವಿದ್ವಾಂಸರು ಈ ಸಾಹಿತ್ಯದ ಮಹತ್ವವನ್ನು ಅರಿತು ಸಂಗ್ರಹಿಸಿದಾಗ, ದೇಶೀಯ ವಿದ್ವಾಂಸರು ಅದಕ್ಕೆ ಮೌಲ್ಯ ನೀಡಿದರು. ಆಧುನಿಕ ತಂತ್ರಜ್ಞಾನ ಮತ್ತು ಜಾಗತೀಕರಣದಿಂದ ಜನಪದ ಕಲೆ ಕುಗ್ಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ, ಅದನ್ನು ಉಳಿಸಿ ಬೆಳೆಸುವುದು ಸಮಾಜದ ಹೊಣೆಗಾರಿಕೆ. ಹೀಗೆ ಜನಪದ ಸಾಹಿತ್ಯವು ಕನ್ನಡ ಸಂಸ್ಕೃತಿಯ ಶ್ರೀಮಂತ ಪರಂಪರೆ, ಜೀವನದ ದರ್ಶನ ಮತ್ತು ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುವ ಶಾಶ್ವತ ಸಂಪತ್ತು.

Files

25. ಜಾನಪದ ಸಾಹಿತ್ಯ ಮತ್ತು ಸ್ತ್ರೀ ಚಿಂತನೆ.pdf