Published May 9, 2024 | Version v1
Journal article Open

ಸಂಗೀತದ ಹುಟ್ಟು ಮತ್ತು ಬೆಳವಣಿಗೆ

Description

ಭಾರತೀಯ ಸಂಗೀತದ ಇತಿಹಾಸ, ಸಂಗೀತದ ಉಗಮ ಮತ್ತು ವಿಕಾಸ ಹೇಗಾಯಿತು, ಯಾರಿಂದಾಯಿತು ಎಂದು ಪರಿಪೂರ್ಣವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಸಂಗೀತದ ಹುಟ್ಟಿನ ಬಗೆಗೆ ವಿದ್ವಾಂಸರಲ್ಲಿ ಭಿನ್ನಾಬಿಪ್ರಾಯಗಳಿವೆ. ಶ್ರೀ ಟಿ.ವಿ.ಸುಬ್ಬರಾವ್ ಇವರು ತಮ್ಮಸ್ಟಡೀಸ್ ಇನ್ ಇಂಡಿಯನ್ ಮ್ಯೂಸಿಕ್ಎಂಬ ಪುಸ್ತಕದಲ್ಲಿಆದಿಮಾನವರ ಮನೋಭಾವಗಳು ನೈಸರ್ಗಿಕ, ಸುಖಪೂರ್ಣ ಹಾಗೂ ದುಃಖ ಪೂರ್ಣ ಅನುಭವದ ಅನುಸಾರವಾಗಿ ಬದಲಾಯಿಸುತ್ತಿದ್ದವು. ಅರಣ್ಯದಲ್ಲಿ ಆದಿಮಾನವನಿಗೆ ಸಂತೋಷವಾದಾಗ ಉಚ್ಛಧ್ವನಿಯಲ್ಲಿ ಕೂಗುತ್ತಿದ್ದನು. ದುಃಖವಾದಾಗ ಅವನಆಕ್ರೋಶದಧ್ವನಿ ನೀಚವಾಗುತ್ತಿತ್ತು. ಪಶು-ಪಕ್ಷಿಗಳ ರೋಧನೆ, ದುಂಬಿಯ ಝೇಂಕಾರ, ಧನುಸ್ಸಿನ ಠೇಂಕಾರ, ಬಿದಿರು ವನದಲ್ಲಿ ಗಾಳಿಯ ಚಲನದಿಂದ ಉತ್ಪತ್ತಿಯಾಗುವ ಧ್ವನಿ ಇತ್ಯಾದಿಗಳಲ್ಲಿಯೂ ಪ್ರಾಚೀನ ಸಂಗೀತ ಮೂಲವಡಗಿದೆ” (ನಾಗ ಪುಷ್ಪಲತಾ, ಕರ್ನಾಟಕ ರಂಗ ಕಲೆಗಳ ಕೋಶ, ಪು. ೩೧) ಎಂದು ಉಲ್ಲೇಖಿಸಲಾಗಿದೆ. ಸಂಗೀತ ಕಲೆಯು ಅತ್ಯಂತ ಪುರಾತನವಾದದ್ದು ಅದರ ಪ್ರಾರಂಭ ಎಲ್ಲಿಂದ ಹೇಗೆ, ಯಾವಾಗ ಆಯಿತು ಎಂದು ಹೇಳುವುದು ತುಂಬ ಕಷ್ಟ. ಜಗತ್ತು ಸೃಷ್ಟಿಯಾದಾಗಲೇ, ಸಂಗೀತದ ಉಗಮವಾಯಿತು ಎನ್ನಬಹುದು. “Music is born of nature and has been essentially an integral part of life from the very beginning of the creation and developed with the growth of civilization” (ನಾಗ ಪುಷ್ಪಲತಾ, ಕರ್ನಾಟಕ ರಂಗ ಕಲೆಗಳ ಕೋಶ) ಮಾನವನಿಗೂ ಮೊದಲು ಸಂಗೀತವಿದ್ದಿತ್ತೆಂಬ ಹೇಳಿಕೆಯನ್ನು ಗಮನಿಸಿದರೆ ವೇದ್ಯವಾಗುತ್ತದೆ. ನಿಸರ್ಗಕ್ಕೂ, ಕಲೆಗೂ ಅವಿನಾಭಾವ ಸಂಬಂಧವಿದೆ. ನಿಸರ್ಗ ಸೌಂದರ್ಯ, ಸ್ವರೂಪಗಳೆಲ್ಲವನ್ನೂ ಕಲೆಯು ತನ್ನಲ್ಲಿ ಅಡಗಿಸಿಕೊಂಡಿದೆ. ನಿಸರ್ಗದ ಸಹಜ ಕ್ರಿಯೆಗಳಾದ ಹರಿಯುವ ನೀರು, ಪಕ್ಷಿಗಳ ಕೂಗು ಮುಂತಾದವುಗಳನ್ನು ಅನುಕರಿಸುವುದರ ಮೂಲಕವಾಗಿ ಮಾನವ ಹಾಡಲು ಕಲಿತನು. ಪ್ರಪ್ರಥಮ ಬಾರಿಗೆ ಬರಿಯ ಧ್ವನಿಯ ಮೂಲಕ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದು, ನಂತರ ನಾದದ ಮೂಲಕ ವ್ಯಕ್ತಪಡಿಸಲಾರಂಭಿಸಿದನು.

Files

ಸಂಗೀತದ ಹುಟ್ಟು ಮತ್ತು ಬೆಳವಣಿಗೆ.pdf