Published May 25, 2023 | Version 24 February 2023

ಪಂಚತಂತ್ರದಲ್ಲಿ ಪ್ರಾಣಿಪಾತ್ರ ವಿವೇಚನೆ

Authors/Creators

  • 1. Dean, Dept of Languange, Karnatak Sanskrit University

Description

ಸಂಸ್ಕೃತ ಜಗತಿನ ಭಾಷಾ ವಿಸ್ಮಯ, ತನ್ನೊಡಲಿನಲ್ಲಿ ಅಗಾಧವಾದ ಶಬ್ದಸಂಪತ್ತನ್ನೂ, ಅರ್ಥಸಂಪತ್ತನ್ನೂ, ಜ್ಞಾನಸಂಪತ್ತನ್ನೂ ತುಂಬಿಕೊಂಡಿದೆ ಎಂದು ತಿಳಿದ ಎಲ್ಲ ವಿದ್ವಾಂಸರ ಅನುಭವ. ವೇದ, ಪುರಾಣ, ಇತಿಹಾಸ ಮೊದಲಾದ ವಿವಿಧ ಬಗೆಯ ಸಂಸ್ಕೃತಿಪ್ರತಿಪಾದಕ, ಸಂಸ್ಕೃತಿಚೋದಕ ಗ್ರಂಥ ಭಂಡಾರಗಳನ್ನು ಮಾತ್ರವಲ್ಲದೇ ಅನೇಕ ವಿಧದ ಸಾಹಿತ್ಯಪ್ರಕಾರಗಳನ್ನೂ, ಶಾಸ್ತ್ರಗಳನ್ನೂ ತನ್ನಲ್ಲಿ ಹೊಂದಿದೆ ಅನೇಕ ಸಹಸ್ರಮಾನಗಳಷ್ಟು ಹಿಂದಿನಿಂದಲೇ. ಇಂತಹ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕಳೆದ ಅನೇಕ ಸಹಸ್ರಮಾನಗಳಿಂದ ವಿಸ್ಮಯವಾದ ಒಂದು  ಪ್ರಕಾರವೆಂದರೆ ಕಥಾಸಾಹಿತ್ಯ.

 

ಕಳೆದ ಹಲ ಸಹಸ್ರಮಾನಗಳಿಂದ ಭಾರತದ ಸಾಹಿತ್ಯವೇ ಅನೇಕ ಕಥೆಗಳ ತೊಟ್ಟಿಲಾಗಿದೆ ಅದರಲ್ಲೂ ಸಂಸ್ಕೃತಸಾಹಿತ್ಯವಂತೂ ಅಂಥ ಸಹಸ್ರಾರು ಕಥೆಗಳಿಗೆ ತನ್ನನ್ನು ತೊಡಗಿಸಿಕೊಂಡಿದೆ. ಈ ಕಥೆಗಳಲ್ಲಿ ಪಾತ್ರಗಳ ವೈವಿಧ್ಯತೆಯಿದೆ ಎನ್ನುವುದು ಇನ್ನೊಂದು ವಿಶೇಷ. ಈ ಕಥೆಗಳಲ್ಲಿ ಮನುಷ್ಯರು ಮಾತ್ರವಲ್ಲದೇ, ಪ್ರಾಣಿ-ಪಕ್ಷಿಗಳೂ ಕೂಡ ಮನುಷ್ಯರಂತೆಯೇ ವ್ಯವಹರಿಸುತ್ತವೆ ಎಂಬುದೇ ಒಂದು ಸೋಜಿಗದ ವಿಷಯ. ತಮ್ಮ ಭಾವನೆಗಳು, ತಮ್ಮ ಚಿಂತನೆಗಳು, ಚಿಂತನೆಯ ಕ್ಷೇತ್ರಗಳು ಇವುಗಳನ್ನು ಮನುಷ್ಯನ ಭಾವಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಅವುಗಳೂ ಕೂಡ ಮನುಷ್ಯರಂತೆಯೇ ವ್ಯವಹರಿಸುತ್ತವೆ ಎಂಬುದು ವಿಶಿಷ್ಟ ಕಲ್ಪನೆಯೇ ಸರಿ. ವೇದ-ರಾಮಾಯಣ-ಮಹಾಭಾರತ-ಪುರಾಣ ಮೊದಲಾದ ಗ್ರಂಥಗಳಲ್ಲಿಯೂ ಈ ಎಲ್ಲ ಪ್ರಾಣಿಗಳು ವಿಶಿಷ್ಟ ಪಾತ್ರವನ್ನೇ ವಹಿಸುತ್ತವೆ ಎಂಬುದನ್ನು ಅರಿತಿದ್ದೇವೆ. ಅಂತೆಯೇ ವಿಷ್ಣುಶರ್ಮನ ಪಂಚತಂತ್ರ, ನಾರಾಯಣ ಭಟ್ಟನ ಹಿತೋಪದೇಶ, ಜಾತಕ ಕಥೆಗಳು ಮೊದಲಾದವು ಈ ಪಟ್ಟಿಗೆ ಸೇರುವ ಗಂಥ ವಿಶೇಷಗಳು. ಇನ್ನೂ ವಿಶೇಷವೆಂದರೆ, ಸಂಸ್ಕೃತದಲ್ಲಿ ಪ್ರೇತ-ಬೇತಾಳಗಳೂ ವಿಕ್ರಮಾದಿತ್ಯನ ಶಕ್ತಿ-ಸಾಮರ್ಥ್ಯಗಳ ಬಗೆಗೆ ಚಿಂತನೆ ನಡೆಸುತ್ತವೆನರಳಿದಳು ಈ ಪಟ್ಟಿಗೆ ಸೇರುವ ಗ್ರಂಥ ವಿಶೇಷಗಳು. ಇನ್ನೂ ವಿಶೇಷವೆಂದರೆ, ಸಂಸ್ಕೃತದಲ್ಲಿ ಪ್ರೇತ-ಬೇತಾಳಗಳೂ ವಿಕ್ರಮಾದಿತ್ಯನ ಶಕ್ತಿ-ಸಾಮರ್ಥ್ಯಗಳ ಬಗೆಗೆ ಚಿಂತನೆ ನಡೆಸುತ್ತವೆ.

ಈ ಕಥೆಗಳ ಕುರಿತಾಗಿನ ಚಿಂತನೆಗಳಲ್ಲಿ ಎದುರಾಗುವ ಅತಿ ದೊಡ್ಡ ಸವಾಲೆಂದರೆ, ಇವುಗಳ ರಚನೆಯ ಸಂದರ್ಭದಲ್ಲಿ ರಚನಕಾರನ ಮನಸ್ಥಿತಿ ಮತ್ತು ಇದನ್ನು ಅರ್ಥೈಸಿಕೊಂಡ ರಸಿಕರ ಮನಸ್ಥಿತಿಗಳು ಹೇಗಿದ್ದಿರಬಹುದೆಂದು? ಪ್ರಾಣಿಪಕ್ಷಿಗಳು ತಮ್ಮೆಲ್ಲ ಶ್ರಮ-ಚಾತುರ್ಯಗಳನ್ನು ಪ್ರದರ್ಶಿಸಿದರೂ ತಂತಮ್ಮ ಮೂಲಗುಣಗಳನ್ನೇನೂ ಅವು ಮರೆತಿರುವುದಿಲ್ಲ. ಪ್ರಾಣಿ-ಪಕ್ಷಿಗಳ ರೂಪ ಮತ್ತು ಮನುಷ್ಯನ ಬುದ್ಧಿ-ಮನಸ್ಸು-ಮಾತು-ಗುಣಗಳು ಕೆಲವೊಮ್ಮೆ ಸಂಕೀರ್ಣತೆಯನ್ನೂ, ಅರ್ಥೈಸುವಿಕೆಯಲ್ಲಿ ಜಟಿಲತೆಯನ್ನೂ ತರುತ್ತವೆ. ಏತನ್ಮಧ್ಯೆ ಈ ವಿಧದ ಉಭಯತೆಗಳು ಮನಸ್ಸನ್ನು ಉಲ್ಲಸಿತಗೊಳಿಸುತ್ತವೆ ಎಂಬುದಂತೂ ನಿರ್ವಿವಾದವೇ ಸರಿ.

ಈ ಪ್ರಬಂಧವು ಪಂಚತಂತ್ರದ ಅಂಥ ಹಲ-ಕೆಲ ಪಾತ್ರಗಳ ಕುರಿತಾಗಿನ ಚಿಂತನೆಯಾಗಿರಲಿದ್ದು, ಪ್ರಾಣಿ-ಪಕ್ಷಿಯಾದರೂ ಮನುಷ್ಯನಂತೆ ವಿವಿಧ ಪರಿಸ್ಥಿತಿಗಳಲ್ಲಿ ವ್ಯವಹರಿಸುವ ಕುರಿತಾಗಿನ ವಿಷಯಗಳನ್ನು ಮುಂದಿಡುವ ಪ್ರಯತ್ನವಾಗಿದೆ. ಮಾನವಿಕ ಸಂಬಂಧಗಳ ಮೂಲ ನೆಲೆಯಲ್ಲಿ ಇಲ್ಲಿ ಪ್ರಾಣಿ-ಪಕ್ಷಿಗಳ ಸ್ವಭಾವ, ಗುಣಾವಗುಣಗಳ ವಿಮರ್ಶೆಯಿದೆ.

ವಿವಿಧ ಭಾಷೆಗಳ ಸಾಹಿತ್ಯಗಳು ಆಧುನಿಕ ಕಾಲದವರೆಗೂ ಅನೇಕ ಹೊರಳುಗಳನ್ನು ಪಡೆದಿದ್ದು, ಇಂದಿಗೂ ಹೊಸ ಹೊಸ ರೀತಿಯ ಸಾಹಿತ್ಯಗಳ ಆವಿಷ್ಕಾರಗಳಾಗುತ್ತಲೇ ಇವೆ. ಅದರಲ್ಲೂ ಸಂಸ್ಕೃತದಂಥ ಪ್ರಾಚೀನ ಭಾಷೆಗಳು ಸಹಸ್ರಮಾನಗಳಿಂದ ಗದ್ಯ, ಪದ್ಯ, ಚಂಪೂ ರೀತಿಯ ಮೂರು ಪ್ರಧಾನ ಸಾಹಿತ್ಯಗಳ ರಚನೆಗೆ ಕಾರಣವಾಗಿದ್ದರೂ, ಬೇರೆಲ್ಲೂ ಕಾಣದ ಶ್ರವ್ಯ ದೃಶ್ಯಕಾವ್ಯ ಭೇದಗಳಿಂದ ಇದು ಆಧುನಿಕ ಸಾಹಿತ್ಯದಲ್ಲಿಯೂ ವಿಶಿಷ್ಟ ಛಾಪನ್ನು ಮೂಡಿಸಿದೆ. ದೃಶ್ಯಗಳಲ್ಲಿ 28 ವಿಧದ ಕಾವ್ಯಗಳನ್ನು ಗುರುತಿಸುವಲ್ಲಿ ನಮ್ಮ ಶಾಸ್ತ್ರಕಾರರು ಇಲ್ಲಿಯ ಸಾಹಿತ್ಯವನ್ನು ಪರಿಪುಷ್ಟಗೊಳಿಸಿದ್ದಾರೆ. ಇಂಥ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕಳೆದ ಅನೇಕ ಸಹಸ್ರಮಾನಗಳಿಂದ ವಿಸ್ಮಯಕರವಾದ ಒಂದು ಪ್ರಕಾರವಾಗಿ ಹೊಮ್ಮಿರುವ ಒಂದು ವಿಶಿಷ್ಟ ಬಗೆಯೆಂದರೆ ಅದು ಕಥಾಸಾಹಿತ್ಯ.

 

.

 

Files

Pro. Girishachandra.pdf

Files (370.2 kB)

Name Size
md5:46d2aba8f6bede9cc61fa1db6f58ac44
370.2 kB Preview Download