ಮಾಧ್ವ ಮತದ ಪ್ರಮುಖ ಆಹಾರ ಪದ್ಧತಿ
Authors/Creators
- 1. Research Scholar, Srinivasa Yoga Samskrit Research Centre, Mukka. Suratkal, Mangaluru
- 2. Research Professor, Srinivasa Yoga Samskrit Research Centre, Mukka. Suratkal, Mangaluru
Description
ಭಾರತೀಯ ಸಂಸ್ಕೃತಿಯಲ್ಲಿ ಸದಾಚಾರ ಪದ್ಧತಿ ಹೇಗೆ ಮುಖ್ಯವೋ ಹಾಗೆ ಆಹಾರ ಪದ್ಧತಿಯೂ ಮುಖ್ಯ. ಮಾನವನಿಗೆ ಬದುಕಲು ಆಹಾರ ಮುಖ್ಯ . ಆಹಾರ ಪದ್ಧತಿಯು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶದಲ್ಲಿ ಬಹಳಷ್ಟು ವಿಭಿನ್ನ ವಾಗಿರುತ್ತದೆ. ಅಲ್ಲದೇ ಆಹಾರ ಸ್ವೀಕರಿಸುವುದರಲ್ಲಿಯೂ ಕೆಲವೊಂದು ಕ್ರಮಗಳು ಇವೆ. ಕ್ರಮಪ್ರಕಾರ ನಾವು ಆಹಾರ ಪದ್ಧತಿಯನ್ನು ಅಳವಡಿಸಿ ಕೊಂಡರೆ ಉತ್ತಮ ಆರೋಗ್ಯ ಹೊಂದಬಹುದು. ಸನಾತನ ಸಂಸ್ಕೃತಿಯಲ್ಲಿ ಸಂಪ್ರದಾಯಕ್ಕೆ ಅನುಕ್ರಮವಾಗಿ ಆಹಾರ ಪದ್ಧತಿಗಳು ರೂಢಿಗೊಂಡಿವೆ .
ಈ ಲೇಖನದಲ್ಲಿ ಮಾಧ್ವ ಸಂಪ್ರದಾಯದಲ್ಲಿ ಇರುವ ಪ್ರಮುಖ ಆಹಾರ ಕ್ರಮಗಳನ್ನ ತಿಳಿಸುವ ಚಿಕ್ಕ ಪ್ರಯತ್ನ . ಮಾಧ್ವ ಸಂಪ್ರದಾಯದಲ್ಲಿ ಭಗವಂತನಿಗೆ ಆಹಾರವನ್ನು ಸಮರ್ಪಿಸಿ ನಂತರ ಭೋಜನ ಮಾಡುವ ಕ್ರಮವಿದೆ . ಭೋಜನ ಪದ್ಧತಿಯಲ್ಲಿ ಕ್ರಮಗಳ ಅನುಸರಣೆ, ವಿವಿಧ ಆಹಾರ ಪ್ರಕಾರಗಳು ಅದಕ್ಕೆ ಸಂಬಂಧಿಸಿದ ನಿಯಮಗಳು, ಇಂದಿನ ಸಮಾಜದಲ್ಲಿ ಅದರ ಪ್ರಾಸ್ತಾವಿಕತೆ, ಅದರ ಅನುಕರಣೆಯಿಂದ ಆಗುವ ಪ್ರಯೋಜನ, ಶುದ್ಧತೆ, ಪರಿವೇಷಣ, ಆಹಾರವನ್ನು ತಿನ್ನುವ ಕ್ರಮಗಳು ಇತ್ಯಾದಿ ವಿಷಯಗಳನ್ನು ಒಳಗೊಂಡಿದೆ ಈ ಲೇಖನ. ಸಮಾಜದಲ್ಲಿ ಆಹಾರವನ್ನು ಸಿದ್ಧಪಡಿಸುವಲ್ಲಿ ಆ ಜನಾಂಗದ ಸಂಪ್ರದಾಯ ಆಹಾರ ತಯಾರಿಕೆಯಲ್ಲಿ ವಿವಿಧತೆ, ಹಬ್ಬಹರಿದಿನಗಳಲ್ಲಿ ಆ ತರಕಾರಿಯ ಬಳಕೆ, ವಸ್ತುಗಳ ಉಪಯೋಗ ಹೀಗೆ ಅನೇಕ ಅಮೂಲ್ಯ ವಿಷಯಗಳನ್ನು ತಿಳಿಸುವಲ್ಲಿ ಈ ಪ್ರಯತ್ನ.